ನಮ್ಮ ಸಹಕಾರಿಯ ಸದಸ್ಯರ ಸಂಖ್ಯೆ ಈಗ 5156ರ ಗಡಿ ತಲುಪಿದೆ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಹಕಾರಿಯ ಬಲಸಂವರ್ಧನೆ ಹೆಚ್ಚುತ್ತ ಹೋಗುತ್ತದೆ ಸಾರ್ವಜನಿಕರ ಮೆಚ್ಚುಗೆ ಪಡೆಯುತ್ತ ತನ್ನ ಜನಪ್ರೀಯತೆನ್ನು ವೃದ್ದಿಸಿಕೊಳ್ಳುತ್ತ ತನ್ನ ಆಸ್ತಿತ್ವವನ್ನು ತೋರ್ಪಡಿಸುತ್ತ ಇತರರನ್ನು ಆಕರ್ಷಿಸುತ್ತ ಅನೇಕ ಮಹತ್ವದ ರೀತಿಯ ಸಾಧನೆಗಳನ್ನು ಮಾಡುತ್ತ ಸಾಗುತ್ತಿರುವುದು ಸ್ವಾಗತಾರ್ಹ ಹಾಗೂ ಸಂತೋಷದಾಯಕ ವಿಷಯ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ದೋಷರಹಿತವಾಗಿ ಪಾರದರ್ಶಕತೆಯಿಂದ ಕೂಡಿರಬೇಕೆಂಬುದು ನಮ್ಮ ಸಹಕಾರಿಯ ಅಪೇಕ್ಷೇಯಾಗಿದೆ. ಸದಸ್ಯರಿಗೆ ಹಲವು ವಿಧವಾದ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತಿಸುವಾಗ ನಮ್ಮ ಸಹಕಾರಿಯ ಆಡಳಿತ ಮಂಡಲಿಯವರು ತಮ್ಮ ಸಂಸ್ಥೆಯ ಉದ್ದೇಶಗಳನ್ನು ಸದಸ್ಯರು ಆಶಯಗಳನ್ನು ಸಹಕಾರಿಯ ಸವಾಲುಗಳನ್ನು ಸಹಕಾರಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಸಹಕಾರಿಯ ಅವಕಾಶಗಳನ್ನು ಮತ್ತು ಮಾರುಕಟ್ಟೆಯ ವೇಗವನ್ನು ಅರಿತು ಸಂಪೂರ್ಣ ವೃತ್ತಿಪರತೆಯಿಂದ ಹಾಗೂ ಪಾರದರ್ಶಕತೆಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ಸಹಕಾರಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಸದಸ್ಯರsನ್ನು ನಿರಂತರ ಜಾಗೃತಿಗೊಳಿಸುತ್ತಿರುವ ಕಾರ್ಯ ನಡೆಯಬೇಕು ಅವರು ನಮ್ಮ ಮಾಲಿಕರು ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರೇ ನಿರ್ವಹಿಸುವ (ಸದಸ್ಯರ ಪರವಾಗಿ ಆಡಳಿತ ಮಂಡಲಿಯವರು ನಿರ್ವಹಿಸುವ) ವ್ಯವಸ್ಥೆಯಿದು ಎಂಬುದು ಆಡಳಿತ ಮಂಡಲಿಯವರ ಗಮನದಲ್ಲಿರಬೇಕು ಅವರು ವಹಿಸಿಕೊಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಆಡಳಿತ ಮಂಡಲಿಯವರ ಕರ್ತವ್ಯ ಆಡಳಿತ ಮಂಡಲಿಯವರು ನೀಡುವ ಜವಾಬ್ದಾರಿಯನ್ನು ನಿರ್ವಹಿಸುವುದು ಸಿಬ್ಬಂದಿಯವರ ಕರ್ತವ್ಯವಾಗಿದೆ.
ನಮ್ಮ ಸಹಕಾರಿ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ, ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ಸರ್ವಸದಸ್ಯರುಗಳಿಗೂ, ಠೇವಣಿದಾರರಿಗೂ, ಗ್ರಾಹಕರಿಗೂ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಙತೆಗಳನ್ನು ಸಲ್ಲಿಸುತ್ತೇವೆ. ಸಮಯೋಚಿತವಾಗಿ ಮಾರ್ಗದರ್ಶನವನ್ನು ನೀಡುತ್ತಿರುವ ಸಹಕಾರಿ ಸಂಘಗಳ ಜಂಟಿ ನಿಬಂಧಕರು, ಕರ್ನಾಟಕರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ಆಡಳಿತ ಮಂಡಳಿ, ಶಾಸನಬದ್ದಲೆಕ್ಕಪರಿಶೋಧಕರು, ಆಂತರಿಕ ಲೆಕ್ಕಪರಿಶೋಧಕರು. ಕಾನೂನು ಸಲಹೆಗಾರರು, ಮೌಲ್ಯ ಮಾಪಕರು ಮತ್ತು ನಮ್ಮ ವ್ಯವಹಾರಗಳಿಗೆ ಸಹಕಾರ ನೀಡುತ್ತಿರುವ ಐಡಿಬಿಐ ಹಾಗೂ ಯೆಸ್ ಬ್ಯಾಂಕುಗಳಿಗೆ ಹಾಗೂ ಅವರ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳು.
ನಮ್ಮ ಈ ಪ್ರಗತಿಯಲ್ಲಿ ಪ್ರಮುಖವಾಗಿ ಪಾತ್ರ ವಹಿಸಿರುವ ಸಹಕಾರಿಯ ಆಡಳಿತ ಮಂಡಳಿಯ ಸದಸ್ಯರು ಸಂದರ್ಭದಲ್ಲಿ ಬೇಸರಿಸದೆ ಸದಾ ನಗುಮುಖದ ಸೇವೆ ನೀಡುತ್ತಿರುವ ಸಿಬ್ಬಂದಿವರ್ಗದವರೆಲ್ಲರಿಗೂ ವಿಶೇಷವಾದ ಅಭಿವಂದನೆಗಳು.
ವಂದನೆಗಳೊಂದಿಗೆ,
ಎಂ.ಮುನಿರೆಡ್ಡಿ
(ಅಧ್ಯಕ್ಷರು)
Sl.No. | Date | Day | General holidays |
---|---|---|---|
01 | 14.01.2025 | Tuesday | Makara Sankranthi |
02 | 26.02.2025 | Wednsday | Maha Shivartri |
03 | 31.03.2025 | Monday | khutba e Ramzan |
04 | 14.04.2025 | Monday | Dr.B. R. Ambedkar Birthday |
05 | 01.05.2025 | Thursday | International Workers' Day |
06/td> | 01.05.2025 | Friday | International Workers' Day |
06 | 15.08.2025 | Friday | Independence Day |
07 | 27.08.2025 | Wednsday | Ganesh Chaturthi |
08 | 20.10.2025 | Friday | Mahanavami/Ayudha pooja/Viajyadashami |
09 | 02.10.2025 | Thurdsday | Gandhi Jayanthi |
10 | 20.10.2025 | Monday | Naraka Chathurdashi |
11 | 22.10.2025 | Wednsday | Balipadyami, Deepavaali |
13 | 01.11.2025 | Saturday | Kannada Rajyothsava |
14 | 02.11.2025 | Saturday | Balipadyami, Deepavali |
15 | 25.12.2025s | Monday | Christmas Day |